Mahantesh Kavatagimath
Mahantesh Kavatagimath

@MKavatagimath

7 Tweets 12 reads Mar 18, 2022
1990 ರ ಮೇ 01 ರಂದು ಕಾಶ್ಮೀರಿ ಕವಿ ಸರ್ವಾನಂದ ಕೌಲ್ & ಅವರ ಮಗ ವೀರೇಂದ್ರ ಕೌಲ್ ರನ್ನ ಅಪಹರಿಸಿದ ಉಗ್ರರು, ಕರುಳು ಬಗೆದು ಖಾರದ ಪುಡಿ ತುಂಬಿ, ಹುಬ್ಬುಗಳ ಮೇಲೆ ಮೊಳೆ ಜಡಿದು ಮರಕ್ಕೆ ನೇತು ಹಾಕಿದ್ದರು!
ಗಾಬರಿ ಬೇಡ ಕಾಂಗ್ರೆಸ್ಸಿಗರೇ ಈ ದೃಶ್ಯ ಸಿನಿಮಾದಲ್ಲಿಲ್ಲ. ಕೆಲವೇ ಸೆಕೆಂಡುಗಳ ಕಾಲ ಮರಕ್ಕೆ ನೇತು ಹಾಕಿದ್ದನ್ನಷ್ಟೇ ತೋರಿಸಲಾಗಿದೆ.1/7
2/7
ಗಿರಿಜಾ ಭಟ್ ಎಂಬ ಅಧ್ಯಾಪಕಿಯನ್ನು ಅಪಹರಿಸಿದ ಭಯೋತ್ಪಾದಕರು, ಅತ್ಯಾಚಾರ ನಡೆಸಿ ಆಕೆಯ ದೇಹವನ್ನು ಸೀಳಿ ಕೊಂದು, ಅಂಗಾಂಗಗಳನ್ನು ರಕ್ಷಣಾ ಪಡೆಗೆ ಪ್ಯಾಕ್ ಮಾಡಿ ಕಳಿಸಿದ್ದರು!
ಭಯ ಏಕೆ ಜಾತ್ಯಾತೀತರೇ? ಈ ದೃಶ್ಯಗಳೂ ಸಿನಿಮಾದಲ್ಲಿಲ್ಲ. ಶಾರದಾ ಎಂಬಾಕೆಯನ್ನು ಮಾತ್ರ ಮರ ಕತ್ತರಿಸುವ ರೀತಿ ಕತ್ತರಿಸಿದ ಒಂದು ಚಿಕ್ಕ ದೃಶ್ಯವಿದೆ ಅಷ್ಟೇ!
3/7
ಅದೆಷ್ಟೋ ಪಂಡಿತರನ್ನು ಕೊಂದು, ದೇಹಕ್ಕೆ ಕಲ್ಲು ಕಟ್ಟಿ ಝೇಲಂ ನದಿಗೆ ಎಸೆದ ದೃಶ್ಯಗಳಾಗಲೀ, ಮತಾಂತರವಾಗಲೊಪ್ಪದ ಪಂಡಿತರ ಕುತ್ತಿಗೆ ಕಡಿದ ದೃಶ್ಯಗಳಾಗಲೀ ಈ ಸಿನಿಮಾದಲ್ಲಿ ಇಲ್ಲವೇ ಇಲ್ಲ!
ಧೈರ್ಯ ತಂದುಕೊಳ್ಳಿ ಶಾಂತಿಧೂತರ ಬ್ರದರ್ಸ್ ಗಳೇ!
4/7
ಆಜಾದಿ ಆಜಾದಿ ಎಂದು ಕೂಗುವ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಸರಳಾ ಭಟ್ ಎಂಬ 20ರ ಯುವತಿಯನ್ನು ಅಪಹರಿಸಿ, ಲೈಂಗಿಕವಾಗಿ ಹಿಂಸಿಸಿ, ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ, ಗುಂಡು ಹೊಡೆದು ಸಾಯಿಸಿ ಆಕೆಯ ಮೆನೆಯ ಮುಂದೆ ಎಸೆದು ಹೋಗುತ್ತಾರೆ!
ಈ ಪೈಶಾಚಿಕತೆಯನ್ನೂ ಆ ಸಿನಿಮಾದಲ್ಲಿ ತೋರಿಸಿಲ್ಲ, ಮತ್ಯಾಕೆ ಅಂಜಿಕೆ ಎಡಪಂಥೀಯರೇ?
5/7
ಪ್ರತ್ಯೇಕತಾವಾದಿಗಳ ತಂಡ ಪೇದೆಯೊಬ್ಬನ ಕೈಕಾಲಿಗೆ ಗುಂಡು ಹೊಡೆದು ಸೇತುವೆಗೆ ತೂಗು ಹಾಕಿತ್ತು,ರಕ್ತ ಹರಿದೇ ಆ ಪೊಲೀಸ್ ಪೇದೆ ಸತ್ತಿದ್ದ.
ನವೀನ್ ಸಪ್ರು ಎಂಬ ವ್ಯಕ್ತಿಗೆ ಗುಂಡು ಹೊಡೆದು, ನರಳಾಡುತ್ತಿದ್ದ ಆತ ಸಾಯುವವರೆಗೆ ಅವನ ಸುತ್ತ ನಿಮ್ಮ ಶಾಂತಿಪಾಲಕರು ನರ್ತಿಸಿದ್ದರು.
ದಂಗಾಗಬೇಡಿ ಬುದ್ದಿಜೀವಿಗಳೇ ಈ ಘಟನೆಯನ್ನೂ ತೋರಿಸಿಲ್ಲ!
6/7
ಕೇವಲ 3 ಗಂಟೆಯ ಸಿನಿಮಾದಲ್ಲಿ 5 ಲಕ್ಷ ಕಾಶ್ಮೀರಿ ಪಂಡಿತರ 30 ವರ್ಷಗಳ ನರಕಯಾತನೆಯನ್ನು ಹೇಗೆ ಸೆರೆಹಿಡಿಯಲು ಸಾಧ್ಯ?
ಅದೆಷ್ಟೋ ಸೈನಿಕರ, ಸಾವಿರಾರು ಅಮಾಯಕ ಪಂಡಿತರ ಮಾರಣಹೋಮವನ್ನು 3 ಗಂಟೆಗಳ ಅವಧಿಯಲ್ಲಿ ಹೇಗೆ ತೋರಿಸಲು ಸಾಧ್ಯ?
ಅಳುಕು ಬೇಡ ಮಾನವ ಹಕ್ಕುಗಳ ಹೋರಾಟಗಾರರೇ!
7/7
ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹೃದಯ ವಿದ್ರಾವಕ ಅಟ್ಟಹಾಸಗಳ ಪೈಕಿ ಸಿನಿಮಾದಲ್ಲಿ ತೋರಿಸಬಹುದಾದಷ್ಟನ್ನೇ ತೋರಿಸಿದ್ದಾರೆ ಅಷ್ಟೇ!
ಈ ಚಿತ್ರದ ವಿರೋಧಿಗಳೇ, ಚಿಂತೆ ಬೇಡ ಒಂದೇ ಒಂದು ಸಲ #KashmirFiles ಸಿನಿಮಾ ನೋಡಿ, ಪ್ರಾಯಶ್ಚಿತವಾದರೂ ಆದೀತು!
(ಬೇಳೂರು ಸುದರ್ಶನ ಅವರ ಲೇಖನದ ಕೆಲ ಆಯ್ದ ಭಾಗ ಮಾತ್ರ ಜಾಗೃತಿಗಾಗಿ ಬಳಸಿಕೊಳ್ಳಲಾಗಿದೆ)

Loading suggestions...